ಗದಗ:ಸೌಖ್ಯದಾ ಆಸ್ಪತ್ರೆ, ಗದಗ ವತಿಯಿಂದ ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಪ್ರತಿ ವರ್ಷ ಅಕ್ಟೋಬರ್ 20 ರಂದು ಆಚರಿಸಲಾಗುವ ಈ ದಿನದ ಉದ್ದೇಶ, ಮೂಳೆಯ ದ್ರವ್ಯರಾಶಿ ಮತ್ತು ಸಾಂದ್ರತೆಯ ನಷ್ಟದಿಂದ ಉಂಟಾಗುವ ಆಸ್ಟಿಯೊಪೊರೋಸಿಸ್ (ಅಸ್ಥಿರಂಧ್ರತೆ) ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.ಈ ಸಂದರ್ಭದಲ್ಲಿ ಡಾ. ಚನ್ನವೀರ್ ನಾಲ್ವಡ್ (ಎಲುಬು–ಕೀಲು, ಹಾಗೂ ಕೀಲು ಬದಲಾಯಿಸುವ ಶಸ್ತ್ರಚಿಕಿತ್ಸಕರು) ಅವರು “ಆಸ್ಟಿಯೊಪೊರೋಸಿಸ್ನ ಕಾರಣಗಳು ಮತ್ತು ತಡೆಗಟ್ಟುವ ಮಾರ್ಗಗಳು” ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ, ಗದಗ ನ ಪ್ರತಿನಿಧಿಗಳಾದ ಶ್ರೀ ಕೆ ಎಚ್. ಬೇಲೂರು, ಶ್ರೀ ಬಿ ಮ್. ಬಿಳೇಯಲಿ, ಪ್ರೋ.ಎಮ್.ಸಿ. ವಗ್ಗಿಯವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯದ ಬಗ್ಗೆ ತಪಾಸಣೆ ಹಾಗೂ ಸಲಹೆಗಳನ್ನು ಪಡೆದರು.ಈ ಕಾರ್ಯಕ್ರಮದಲ್ಲಿ ಸೌಖ್ಯದಾ ಆಸ್ಪತ್ರೆಯ ವೈದ್ಯರಾದ ಡಾ.ತೇಜಸ್ವಿನಿ ಹಿರೇಮಠ್ (ಸ್ತ್ರೀರೋಗ ತಜ್ಞರು), ಡಾ. ಶಿವನಗೌಡ ಜೋಳದರಾಶಿ (ಚಿಕ್ಕ ಮಕ್ಕಳ ಹಾಗೂ ನವಜಾತ ಶಿಶು ತಜ್ಞರು), ಡಾ.ಪ್ರವೀಣ ಡಂಬಳ (ಮೂತ್ರರೋಗ ತಜ್ಞರು) ಡಾ.ನಿಜಾಮುದ್ದೀನ್ ಅತ್ತಾರ್ (ಜನರಲ್ ಮೆಡಿಸಿನ್ ತಜ್ಞರು), ಡಾ. ಅಂಜಲಿ ನಾಲ್ವಡ್ (ಕಿವಿ–ಮೂಗು–ಗಂಟಲು ತಜ್ಞೆ – ENT) ಉಪಸ್ಥಿತರಾಗಿ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.

ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಪ್ರಯುಕ್ತ, ಅಕ್ಟೋಬರ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಹಾಗೂ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ. ಅದರ ಭಾಗವಾಗಿ ಅಕ್ಟೋಬರ್ 17ರಂದು ಉಚಿತ ಎಲುಬಿನ ಸಾಂದ್ರತೆ ಪರೀಕ್ಷೆ (Bone Density Test) ನಡೆಸಲಾಯಿತು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸೌಖ್ಯದಾ ಆಸ್ಪತ್ರೆ, ಗದಗ#6675, ಕೆ.ಸಿ. ರಾಣಿ ರಸ್ತೆ, 7ನೇ ಅಡ್ಡರಸ್ತೆ, ಗದಗ+91 78290 29139, 08372 295959 / 58
