ಬಸವಣ್ಣನವರ, ಬಸವಾದಿ ಶರಣರ ಅನುಯಾಯಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿ, ಸಾಮಾಜಿಕ ನ್ಯಾಯದ ಪರವಾಗಿ ಸದಾ ದ್ವನಿ ಮಾಡುವ ನಿಷ್ಟಾವಂತ ಹೋರಾಟಗಾರ, KPCC ರಾಜ್ಯ ಕಾರ್ಯದರ್ಶಿ ಕಾರ್ಮಿಕ ವಿಭಾಗ ಹುದ್ದೆಯಲ್ಲಿರುವ ಆತ್ಮೀಯ ಸಹೋದರ ಹಿರೇಮನಿ ಗಾಳೆಪ್ಪ ಹ ಅವರು ಕುಕನೂರ ಪೋಲಿಸ್ ಠಾಣೆಗೆ ಸಂಬಂಧಿಕರ ದೂರಿನ ವಿಚಾರಣೆಗೆ ಹೋದಾಗ ಕುಕನೂರ ಪಿಎಸ್ಐ ಗುರುರಾಜ ಅವರಿಂದ ಏಕಾಏಕೀ ಹಲ್ಲೆ ಮಾಡುವುದರ ಜೊತೆಗೆ ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿದ್ದು ನಿಜಕ್ಕೂ ಇದೊಂದು ಸಮಾಜಕ್ಕೆ ಮಾರಕವಾದ ಸಂಗತಿ.

ನ್ಯಾಯ ಕೇಳಲು ಠಾಣೆಗೆ ಹೋಗಿರುವ ಗಾಳೆಪ್ಪ ಅವರ ಮೇಲೆ ಪೊಲೀಸರು ಈ ರೀತಿಯ ಕೃತ್ಯವನ್ನು ಎಸೆಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ತಕ್ಷಣವೇ ಎಚ್ಚೆತ್ತ ದಲಿತ ಸಂಘಟನೆಗಳು ಹಾಗೂ ಮಾದಿಗ ಮುಖಂಡರ, ಹೋರಾಟಗಾರರು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕುಕನೂರ ಠಾಣೆಯ ಪಿಎಸ್ಐ ಗುರುರಾಜ ಅವರನ್ನು ತಕ್ಷಣವೇ ಅಮಾನತ್ತು ಮಾಡಬೇಕೆಂದು ಮತ್ತು ಅವರ ವಿರುದ್ಧ FIR ದಾಖಲಿಸಲೇಬೇಕು ಎಂದು ತಡರಾತ್ರಿ 12 ವರೆಗೂ ಹೋರಾಟ ಮಾಡಿದ್ದು.ಹೋರಾಟಕ್ಕೆ ಮಣಿದು ಪಿಎಸ್ಐ ಗುರುರಾಜ ಅವರನ್ನು ಅವನತ್ತು ಮಾಡಿದ್ದು ಹೋರಾಟಕ್ಕೆ ಸಂದ ಜಯ.ಸಹೋದರನಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಮತ್ತು ಈ ಕೂಡಲೇ ಪಿ ಎಸ್ ಐ ನ್ನು ಜಾತಿನಿಂದನೆ ಕೇಸನ ಅಡಿಯಲ್ಲಿ ಬಂಧನ ಮಾಡಬೇಕು ನೊಂದು ಗಾಳೇಪ್ಪ ಹಿರೇಮನಿಯ ಅವರಿಗೆ ನ್ಯಾಯ ಕೊಡಬೇಕು ಅಂದಾಗ ಇಂತಹ ನಿಚ್ಚ ಕೃತ್ಯ ಮಾಡುವ ಮುನ್ನ ಮುಂದಿನ ವ್ಯಕ್ತಿಗೆ ಎಚ್ಚರಿಕೆ ಗಂಟೆಯಾಗಬೇಕು ಅವರನ್ನು ಬಂಧನ ಮಾಡದಿದ್ದರೆ ಎಲ್ಲಾ ಕಡೆ ರಾಜ್ಯಾದ್ಯಂತ ಬಂದ ಕರೆ ಕೊಡುತ್ತೇವೆ ಎಂದು ಈ ಮೂಲಕ ಹೇಳುತ್ತೇವೆ .ಮಂಜುನಾಥ ಬುರಡಿ ಆದಿಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗೀಯ ಸಂಚಾಲಕರು.
