ಶಿರಹಟ್ಟಿ :ಭಾಗದಲ್ಲಿ ಈಗಾಗಲೆ ಮಳೆ ಉತ್ತಮವಾಗಿ ಆಗಿರುವುದರಿಂದ ಹಿಂಗಾರು ಬಿತ್ತನೆ ಮಾಡಲು ನಮ್ಮ ರೈತರು ಹೊಲವನ್ನು ಹದಗೊಳಿಸಿ ಬಿತ್ತಲು ಅಣಿಯಾಗಿದ್ದಾರೆ.ರೈತರು ಬಿತ್ತನೆಗೆ ಹೆಚ್ಚುವರಿ ಬೀಜಗಳನ್ನು ಕೇಳಿದರೆ ಅವರಿಗೆ ನೀಡಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಶಿರಹಟ್ಟಿ ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಸಂದೀಪ್ ಕಪ್ಪತ್ತನವರ, ಸಂತೋಷ ಕುರಿ, ಈರಣ್ಣ ಅಂಗಡಿ, ಪ್ರಕಾಶ ಕಲ್ಯಾಣಿ, ಸಂತು ಡಿಜೆ, ರಮೇಶ ಲಮಾಣಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಸೋಮಣ್ಣವರ
