ಗಜೇಂದ್ರಗಡ:ದೈಹಿಕ ಹಾಗೂ ಮಾನಸಿಕ ಸಧೃಡ್ಡಕ್ಕಾಗಿ ಕ್ರೀಡೆಗಳ ಅವಶ್ಯ ಬಹು ಮುಖ್ಯ. ಕ್ರೀಡೆಯಿಂದ ಮನುಷ್ಯನ ಎಲ್ಲ ಅಂಗಗಳು ಹಾಗೂ ಜೀರ್ಣ ಕ್ರಿಯೆಗಳು ಸರಿಯಾಗಿ ಕೆಲಸ ಮಾಡಲು ಸಹಾಯಕವಾಗುತ್ತದೆ. ಮಾನವರ ಸರ್ವತೊನ್ಮುಖ ಅಭಿವೃದ್ಧಿಗೆ ಕ್ರೀಡೆಗಳು ಪ್ರೇರಣೆ ನೀಡುತ್ತವೆ ಎಂದು ಕೇಶವ ರಾಯಬಾಗಿ ಹೇಳಿದರು.

ನಗರದ ಭೋವಿ ಭಜೇಂತ್ರಿ ಸಮಾಜದ ವತಿಯಿಂದ ನಡೆದ ಬಿಬಿಪಿಎಲ್ ಸೀಸನ್ 4 ರ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣ ಪ್ರೇಮ ಫೌಂಡೇಶನ್ ನ ಅಧ್ಯಕ್ಷ ಕೇಶವ ರಾಯಬಾಗಿ ಮಾತನಾಡಿ ಸಾಮಾನ್ಯವಾಗಿ ಕ್ರೀಡೆ ಮತ್ತು ದುಶ್ಚಟಗಳೆರಡೂ ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ನಿಲ್ಲುವ ಸಾಂಸ್ಕೃತಿಕ ಘಟಕಗಳು. ದುಶ್ಚಟ ಎಂದಾಗ ಅದು ಮಾನಸಿಕವಾದದ್ದಾಗಿರಬಹುದು ಅಥವಾ ದೈಹಿಕವಾದದ್ದೂ ಆಗಿರಬಹುದು. ಒಟ್ಟಾರೆ ಅಂತಹ ಚಟಗಳಿಂದ ದೂರ ಇರಬೇಕೆಂಬ ಪ್ರಜ್ಞೆ ಕ್ರೀಡಾ ಪಟುವಿಗೆ ಅಪ್ರಜ್ಞೆಪೂರ್ವಕವಾಗಿಯೂ ಇರುತ್ತದೆ. ಆದ್ದರಿಂದಲೇ ಇಂತಹ ಕ್ರಿಯೆಗಳಲ್ಲಿ ತೊಡಗುವ ಪಟು ಮನಷ್ಯಪರವಾಗಿ ಕ್ರಿಯಾತ್ಮಕವಾಗಿ ಆಲೋಚಿಸುತ್ತಾನೆ. ಹೀಗೆ ಆಲೋಚಿಸುತ್ತಾ ತಾನೇ ಮನುಷ್ಯನಾಗುತ್ತಾನೆ. ಇತರರಿಗೂ ಮಾದರಿಯಾಗುತ್ತಾನೆ. ತೀರಾ ಆದರ್ಶ ವ್ಯಕ್ತಿಯಾಗಲು ಎಲ್ಲರಿಗೂ ಸಾಧ್ಯವಾಗದಿದ್ದರೂ ಕಡೆಯ ಪಕ್ಷ ಸಮಾಜ ಕಂಟಕರಂತೂ ಆಗಲಾರರು ಎಂಬುದು ಕ್ರೀಡೆಗಿರುವ ಒಂದು ಮುಖ್ಯ ಆಯಾಮ ಎಂದರು.

ಬಳಿಕ ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾದ್ಯಕ್ಷ ವಿನಾಯಕ ಜರತಾರಿ, ಹಿರಿಯ ಕ್ರಿಕೆಟ್ ಆಟಗಾರ ರಾಘವೇಂದ್ರ ಕೊಣ್ಣುರಕರ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಥಮ ಪ್ರಶಸ್ತಿ ನೀಡಿದ ಮಾರುತಿ ಭಜೇಂತ್ರಿ, ದ್ವೀತಿಯ ಪ್ರಶಸ್ತಿ ನೀಡಿದ ಕನಕಪ್ಪ ಕಲ್ಲೊಡ್ಡರ ಸೇರಿದಂತೆ ಸಮಾಜದ ಹಿರಿಯರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕನಕಪ್ಪ ಕಲ್ಲೊಡ್ಡರ ಷಣ್ಮುಖಪ್ಪ ಚಿಲಝೇರಿ, ಹನಮಂತ ಭಜೇಂತ್ರಿ, ಶಿಕ್ಷಕರು ವೆಂಕಟೇಶ ಬಂಕದ, ಮುತ್ತಣ್ಣ ಭಜೇಂತ್ರಿ, ಲಕ್ಷ್ಮಣ ಭಜೇಂತ್ರಿ, ಆನಂದ ನಂದಿಹಾಳ, ಮಾರುತಿ ಭಜೇಂತ್ರಿ, ಅಶೋಕ ಭಜೇಂತ್ರಿ, ಅನಿಲ ನಿಡಗುಂದಿ, ರವಿಚಂದ್ರ ನಿಡಗುಂದಿ, ಪರಶುರಾಮ ಭಜೇಂತ್ರಿ, ಬಸವರಾಜ ನಿಡಗುಂದಿ, ಸೇರಿದಂತೆ ಅನೇಕರು ಇದ್ದರು
