
ಗಜೇಂದ್ರಗಡ: ಸೆ.22ರಿಂದ ಪ್ರಾರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಜಾತಿ ಕಾಲಂ (ಕಾಲಂ 9) ನಲ್ಲಿ ‘ಕುರುಬ’ ಎಂದು ಬರೆಸಿಕೊಳ್ಳುವಂತೆ ತಾಲೂಕು ಕರ್ನಾಟಕ ಪ್ರದೇಶ ಕುರುಬ ಸಮಾಜದ ಅಧ್ಯಕ್ಷ ಶರಣಪ್ಪ ದೊಣ್ಣೆಗುಡ್ಡ ಅವರು ಮನವಿ ಮಾಡಿದ್ದಾರೆ.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮೀಕ್ಷೆದಾರರು ಉಪಜಾತಿ ಕುರಿತು ಕೇಳಿದರೆ ಉಪಜಾತಿ ಇಲ್ಲ ಎಂದು ಹೇಳಬೇಕು ಎಂದು ಹೇಳಿದರು.
ವೃತ್ತಿ ಸಂಬಂಧಿಸಿದ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು. ಆದರೆ ಕುಲಕಸುಬು ಕಾಲಂನಲ್ಲಿ ಯಾವುದೇ ಮುಜುಗರವಿಲ್ಲದೆ ತಮ್ಮ ಕುಲಕಸುಬನ್ನು ಸ್ಪಷ್ಟವಾಗಿ ಬರೆಸಿಕೊಳ್ಳಬೇಕೆಂದು ಸೂಚಿಸಿದರು.
ಈ ವೇಳೆ ಸಮಾಜದ ಶ್ರಿಶೈಲಪ್ಪಾ ಕಾಟಿ, ವಿರೂಪಾಕ್ಷಪ್ಪ ಕರಿವಳ್ಳಿ,ಕಳಕಣ್ಣಗೌಡ ಗೌಡ್ರ ,ಬಣೇಪ್ಪ ಗೂಳಿ,ಸಾಂತಪ್ಪ ಬೇವಿನಮರದ, ಚಂದ್ರಶೇಖರ್ ಉಸಲಕೊಪ್ಪ, ರಂಗನಾಥ್ ಮೇಟಿ,ಎಚ್ ಎನ್ ನಾಯ್ಕರ್, ಶರಣಪ್ಪ ಹಾದಿಮನಿ,ಮೈಲ್ಲಾರಪ್ಪ ಸೋಂಪೂರ, ಸಿದ್ದಪ್ಪ ಹಳ್ಳದ,ಪರಶು ಶಂಕ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
