
ಗಜೇಂದ್ರಗಡ:ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ದೀಪ ಬೆಳಗಿಸುವುದರ ಮೂಲಕ ಪುರಸಭೆ ಸದಸ್ಯ ರಾಜು ಸಾಂಗ್ಲಿಕರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಆರೋಗ್ಯದ ಮೇಲೆ ಗಮನಹರಿಸುವ ಒಂದು ಅಭಿಯಾನವಾಗಿದ್ದು, ಇದನ್ನು 2025ರ ಸೆಪ್ಟೆಂಬರ್. 17ರಂದು ಪ್ರಾರಂಭಿಸಲಾಯಿತು. ಈ ಅಭಿಯಾನದ ಉದ್ದೇಶ, ವಿವಿಧ ಕಾಯಿಲೆಗಳನ್ನು ಮಧುಮೇಹ, ಕ್ಯಾನ್ಸರ್ ಮುಂಚಿತವಾಗಿ ಪತ್ತೆಹಚ್ಚಲು ಆರೋಗ್ಯ ಶಿಬಿರಗಳನ್ನು ನಡೆಸುವುದು, ಪೌಷ್ಟಿಕಾಂಶ ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು. ಆರೋಗ್ಯವಂತ ಮಹಿಳೆಯರು ಸಮಾಜದ ಬಲವರ್ಧನೆಗೆ ಕೊಡುಗೆ ನೀಡುತ್ತಾರೆ ಎಂಬುದು ಈ ಅಭಿಯಾನದ ಮುಖ್ಯ ಸಿದ್ಧಾಂತವಾಗಿದೆ.

ಸಂದರ್ಭದಲ್ಲಿ ಡಾ ಅನಿಲಕುಮಾರ ತೋಟದ ಮಾತನಾಡಿ, ಮಹಿಳೆಯರ ಆರೋಗ್ಯ ತಪಾಸಣೆ ಮಾಡಿ ಕ್ಷಯರೋಗಕ್ಕೆ ಚಿಕಿತ್ಸೆ ನೀಡಲಾಗುವುದು. ಅಸಾಂಕ್ರಾಮಿಕ ರೋಗಗಳಾದ ಬಿಪಿ. ಶುಗರ್, ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಕಿಡ್ನಿ, ಕಣ್ಣಿನ ಪೊರೆಗಳನ್ನು ಗುರುತಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಮುಟ್ಟಿನ ಆರೋಗ್ಯ ತಿಳಿವಳಿಕೆ ಮತ್ತು ವೈಯಕ್ತಿಕ ಆರೋಗ್ಯ, ಪೌಷ್ಟಿಕ ಆಹಾರದ ಮಹತ್ವ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅರಿಹಂತ ಬಾಗಮಾರ,ಶರಣಪ್ಪ ಚಳಗೇರಿ,ಆನಂದ ಹುರಕಡ್ಲಿ, ರೇಣುಕಾ ಕುಂಬಾರ, ವೀಣಾ ಹಾದಿ, ಇತರರು ಇದ್ದರು.
