ಗಜೇಂದ್ರಗಡ:ಸಾಮಾಜಿಕ ಅಸಮಾನತೆ ಮತ್ತು ಮೂಢನಂಬಿಕೆಯನ್ನು ಹೋಗಲಾಡಿಸಲು ಕನಕದಾಸರ ವೈಚಾರಿಕ ಹೊರಾಟ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಹಾಗೂ ಯುವ ಸಮುದಾಯ ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳುವದು ಅಗತ್ಯವಾಗಿದೆ ಎಂದು ಧಾರವಾಡದ ಮುನ್ಸೂರ್ ರೇವಣಸಿದ್ಧೇಶ್ವರ ಮಠದ ಪೂಜ್ಯ ಬಸವರಾಜ ದೇವರು ಹೇಳಿದರು.

ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ಕಳಕಾಪೂರ ಗ್ರಾಮದಲ್ಲಿ 538ನೇ ಕನಕದಾಸರ ಜಯಂತಿಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮದಲ್ಲಿ ಕನಕ ಭವನ ನಿರ್ಮಿಸಿ ನಿತ್ಯ ಕನಕದಾಸರ ಕೀರ್ತನೆ ಹಾಗೂ ಸಾಹಿತ್ಯ ಚಿಂತನೆ ಮಾಡುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು . ಕನಕದಾಸರ ವಿಚಾರಧಾರೆಯನ್ನು ಹಂಚಿ ಸಮಾಜವನ್ನು ವ್ಯಸನ ಮುಕ್ತ ಗೊಳಿಸಬೇಕು ಎಂದರು.

ಧಾರವಾಡದ ವಿದ್ಯಾರಣ್ಯ ಪ್ರೌಢ ಶಾಲೆಯ ಕನ್ನಡ ಉಪನ್ಯಾಸಕ ಬಸವರಾಜ ಪಾಟೀಲ ಅವರು “ಕನಕದಾಸರ ಸಾಹಿತ್ಯದಲ್ಲಿ ನೈತಿಕ ಮೌಲ್ಯ”ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಕನಕದಾಸರ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ದೀವಿಗೆ ಯಾಗಿವೆ ತರತಮ ಸರಿಪಡಿಸಿ ಸಾಮರಸ್ಯ ತರುವ ಅವರ ವಿಚಾರಗಳು ಬೆಲೆ ಬಾಳುವ ಮೌಲ್ಯಗಳಾಗಿವೆ ಕನಕದಾಸರ ಕೀರ್ತನೆಗಳು , ಕಾವ್ಯಗಳು ಮತ್ತು ಮುಂಡಿಗೆಗಳಲ್ಲಿ ಜ್ಞಾನರಾಶಿ ಇದೆ ಅವುಗಳ ಸವಿರುಚಿ ಯುವ ಪೀಳಿಗೆಗೆ ಉಣಬಡಿಸಬೇಕಾಗಿದೆ ಅವರ ಸಾಹಿತ್ಯ ಜ್ಞಾನ ಹಂಚುವುದರಿಂದ ಕನಕದಾಸರ ಜಯಂತಿ ಸಾರ್ಥಕ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಜೇಂದ್ರಗಡ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರು ಆದಬಸವಂತಪ್ಪ ಹೊಸಳ್ಳಿ ಹಾಲುಮತ ಧರ್ಮ, ಸಂಸ್ಕೃತಿ ಹಾಗೂ ಪರಂಪರೆ ಮತ್ತು ಡೊಳ್ಳು ಕುಣಿತದ ಇತಿಹಾಸದ ಬಗ್ಗೆ ವಿವರಣೆ ನೀಡಿದರು.ಹಾಲುಮತ ಸಂಸ್ಕೃತಿ ಹಾಗೂ ನಾಟಕ ಕುರಿತು ಪಿ ಎಚ್ ಡಿ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರಂಪರೆಯ ಕುರುಹುಗಳನ್ನು ತಿಳಿಸಿದರು.
ರೋಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳಾದ ಈಶ್ವರ ಕುರಿಯವರು ಮಾತನಾಡಿ ಕನಕದಾಸರು ಸಾಮಾಜಿಕ ಮತ್ತು ವೈಚಾರಿಕ ಹೋರಾಟಗಾರರು ಅವರ ಗಟ್ಟಿತನದ ಸಾಹಿತ್ಯ ಇಂದಿನ ಸಮಾಜ ಸುಧಾರಿಸಲು ಸಹಕಾರಿ ಅವರ ಜೀವನದ ಹೋರಾಟ ನಮ್ಮೆಲ್ಲರ ಮಾರ್ಗದರ್ಶಿಯಾಗಲಿ ಎಂದರು.
ಸಂಕನೂರಿನ ಧರ್ಮರಮಠದ ಅಭಿಮನ್ಯಪ್ಪಜ್ಜನವರು ಹಿರೇನಸಿಬಿಯ ಧರ್ಮಾಧಿಕಾರಿಗಳು ಬಸಯ್ಯಜ್ಜನವರು ಸಮ್ಮುಖದಲ್ಲಿ ಆಶಿರ್ವಚನ ನೀಡಿದರು, ಇಟಗಿಯ ಧರ್ಮರಮಠದ ನಾಗಪ್ಪಜ್ಜ ಧರ್ಮರ ಅಧ್ಯಕ್ಷತೆ ವಹಿಸಿ ಮಾತನಾಡಿದರು, ತಿಮ್ಮಾಪುರ ಪ್ರೌಢ ಶಾಲೆ ಶಿಕ್ಷಕರು ಕೆ ಎಸ್ ಬೆನಕನವಾರಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಬನ್ನೆಪ್ಪ ಕಟ್ಟಿಮನಿ,ಯಲ್ಲಪ್ಪ ಕುರಿ ಕಳಕನಗೌಡ ಗೌಡ್ರ, ಕಳಕಪ್ಪ ರಾಜೂರ, ಈರಪ್ಪ ಮಾಗಿ, ಅಶೋಕ ಶಿರಹಟ್ಟಿ, ಸಿದ್ರಾಮ ಕಟ್ಟಿಮನಿ, ಮುನಿಯಪ್ಪ ಮಾಗಿ, ಶರಣಪ್ಪ ಕಳಕಾಪೂರ ,ಉಪಸ್ಥಿತರಿದ್ದರು.
ಹೊನಕೇರಪ್ಪ ಕಟ್ಟಿಮನಿ ನಿರೂಪಿಸಿದರು ಅಂದಪ್ಪ ಶಿರಹಟ್ಟಿ ಸ್ವಾಗತಿಸಿದರು ಬಸುರಾಜ ಜಿಗಳೂರ ಮಾಲಾರ್ಪಣೆ ಕಾರ್ಯಕ್ರಮ ನೆಡಸಿದರು ಬಸವರಾಜ ಶಿರಹಟ್ಟಿ ವಂದಿಸಿದರು
