ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವನೆಯಿಂದಾಗಿ 80 ಕುರಿಗಳು ಸಾವನ್ನಪ್ಪಿರುವ ಘಟನೆಯಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ. ಸರಕಾರ ಕೂಡಲೆ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕುರಬ ಸಮುದಾಯದ ಮುಖಂಡ ಸಂತೋಷ ಕುರಿ ಹೇಳಿದರು.

ಈ ಕುರಿತು ಕುರಬ ಸಮುದಾಯದ ವತಿಯಿಂದ ಶಿರಹಟ್ಟಿ ಪಟ್ಟಣದಲ್ಲಿ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಇವರ ಮೂಲಕ ಮಾನ್ಯ ಮುಖ್ಯಮಂತ್ರಿ ಇವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಕಂಬಳಿ, ದೇವು ಪೂಜಾರ, ರಾಮಣ್ಣ ಬಟ್ಟುರ, ಸಚಿನ್ ಜಡಿ, ವಿರೂಪಾಕ್ಷ ಹಿರೇಮಠ, ಸಿದ್ದಪ್ಪ ಸ್ವಾಮಿ, ಸೋಮನಗೌಡ ಮರಿಗೌಡ, ಕಿರಣ್, ಕಾರ್ತಿಕ್ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಸೋಮಣ್ಣವರ
