ಲಕ್ಷ್ಮೇಶ್ವ:ನೀವು ಯಾವುದೇ ರೀತಿಯ ಪರ್ಮಿಷನ್ ಪಡೆಯದೇ ಗ್ರಾಮದಲ್ಲಿ ಇರುವ ಸರಕಾರಿ ಜಾಗದಲ್ಲಿ ಹೀಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬರುವುದಿಲ್ಲ. ಇದನ್ನು ಇಲ್ಲಿಂದ ತೆರವುಗೊಳಿಸಿರಿ ಎಂದು ಗ್ರಾಮ ಪಂಚಾಯತಿ ಪಿಡಿಒ ಸವಿತಾ ಹುನಗುಂದ ಇವರು ಯಳವತ್ತಿ ಗ್ರಾಮಸ್ಥರಿಗೆ ಖಡಕ್ ಎಚ್ಚರಿಕೆ ನೀಡಿದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಯುವಕರು ಪರವಾನಗಿ ಪಡೆಯದೇ ಗ್ರಾಮದ ಸರಕಾರಿ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.ಸುದ್ದಿ ತಿಳಿದು ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ ಸವಿತಾ ಸ್ಥಳಕ್ಕೆ ಬಂದಿದ್ದು ಮೂರ್ತಿ ತೆರವುಗೊಳಿಸಲು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಇಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಕ್ಕೆ ಯಾರ ವಿರೋಧವು ಇಲ್ಲ. ಯಾರಾದರೂ ವಿರೋಧ ಮಾಡಿದರೆ ನಾವು ಅವರನ್ನು ಒಪ್ಪಿಸುತ್ತೇವೆ ಎಂದು ತಿಳಿಸಿದರು.ಈಗಾಗಲೆ ಇಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ ಇದನ್ನು ತೆಗೆಯುವ ಮಾತೆ ಇಲ್ಲ. ನಮಗೆ ಈಗ ಸ್ಥಳದಪರವಾನಗಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
✍️ಚಂದ್ರಶೇಖರ ಸೋಮಣ್ಣವರ
