ಮುಂಡರಗಿ: ತಾಲೂಕಿನ ಚಿಕ್ಕವಡ್ಡಟ್ಟಿ,ಗುಡ್ಡದಬೂದಿಹಾಳ,ಮುರುಡಿ ಮುರುಡಿ ತಾಂಡ,ಮತ್ತು ಬಸಾಪುರ ಗ್ರಾಮಗಳಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆ ಸಲ್ಲಿಸಿದ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿಎಸ್ ಪಾಟೀಲ್ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಚಿಕ್ಕವಡ್ಡಟ್ಟಿ. ಮುರುಡಿ. ಮುರುಡಿ ತಾಂಡ ಗ್ರಾಮದಲ್ಲಿ ರೈತರಿಗೆ ಅವಶ್ಯಕತೆ ಇರುವ ರಸ್ತೆಗಳ ಬೇಡಿಕೆ ಸಲ್ಲಿಸಿದರು ಹೀಗಾಗಿ ಇಂದು ಈ ನಾಲ್ಕು ಗ್ರಾಮಗಳಲ್ಲಿ ಸುಮಾರು ಎರಡು ಕೋಟಿಗೂ ಅಧಿಕ ಅನುದಾನದಲ್ಲಿ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಇನ್ನೂ ಹಲವಾರು ಬೇಡಿಕೆಗಳನ್ನು ಈ ಭಾಗದಲ್ಲಿ ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಕೂಡ ಜಾರಿಗೆ ಮಾಡುವ ಮೂಲಕ ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ಮಾಡುತ್ತಿದೆ ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಒಂದು ಕೋಟಿ ಹನ್ನೆರಡು ಲಕ್ಷ ಕುಟುಂಬಗಳು ಆರ್ಥಿಕವಾಗಿ ಮೇಲೆ ಬಂದಿವೆ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದು ಇದನೆಲ್ಲ ಚಾಣಾಕ್ಷ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಪಿ ಎಸ್ ಎರಿಸ್ವಾಮಿ. ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ್ ಎಚ್. ಬಿಇಒ ಗಂಗಾಧರ ಅಣ್ಣಿಗೇರಿ. ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಬಸವರಾಜ್. ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ್ ಕುಮಾರ್ ಎಲ್ಲಿವಳ. ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಡಿ ಡಿ ಮುರ್ನಾಳ್. ಪುಲಿಕೇಶ್ ಗೌಡ ಪಾಟೀಲ್. ಸುರೇಶ್ ಮ್ಯಾಳಗಿಮನಿ. ಮರಡಪ್ಪ ಹಳ್ಳಿ. ಮಲ್ಲಿಕಾರ್ಜುನ ಕೊಡ್ಲಿ. ಹಾಲೇಶ್ ಮುರುಡಿ. ಚಿಕ್ಕ ವಡ್ಡಟ್ಟಿ ಗ್ರಾಮ ಪಂಚಾಯತಿ ಸದಸ್ಯರು ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

