ಗಜೇಂದ್ರಗಡ:ನಗರದಲ್ಲಿ ದಸರಾ ಹಬ್ಬದ ನಿಮಿತ್ತ ಭೋವಿ ಹಾಗೂ ಭಜೇಂತ್ರಿ ಸಮಾಜದ ಯುವಕರು ಬಿಪಿಎಲ್ ಸೀಸನ್ ೪ ಆಯೋಜನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಟ್ರೋಪಿ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ನಡೆಸಿದರು.

ಕಾರ್ಯಕ್ರಮವನ್ನು ಭೋವಿ ಸಮಾಜದ ಹಿರಿಯರಾದ ಮಾರುತಿ ಕಲ್ಲೊಡ್ಡರ ಉದ್ಘಾಟಿಸಿ ಮಾತನಾಡಿ ಇಂದಿನ ಯುವಕರಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದ್ದು, ಇಂತಹ ಕ್ರೀಡೆಗಳು ಅವರು ಸಹೋದರತ್ವ ಭಾವನೆ ಮೂಡಲು ಸಹಕಾರಿಯಾಗಿವೆ.ಪ್ರತಿಯೊಬ್ಬ ಆಟಗಾರರು ಸಹ ಕ್ರೀಡಾಮನೋಭಾವನೆಯಿಂದ ನಿರ್ಣಾಯಕರು ನೀಡುವ ನಿರ್ಣಯಕ್ಕೆ ಬದ್ದರಾಗಿ ಮಾದರಿ ಟೋರ್ನಾವೆಂಟ್ ಆಗಿ ಯಶಸ್ಸುಗೊಳಿಸಬೇಕಿದೆ ಎಂದರು.

ಬಳಿಕ ಷಣ್ಮುಖಪ್ಪ ಚಿಲಝೇರಿ, ರವಿ ಭಜೇಂತ್ರಿ ಮಾತನಾಡಿದರು.ಇನ್ನು ಇದೇ ಸಂದರ್ಭದಲ್ಲಿ ಲೀಗ್ ನ ಟ್ರೋಪಿಗಳನ್ನು ನಗರದ ದುರ್ಗಾದೇವಿ ದೇವಾಲಯದಿಂದ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಕಾಲಕಾಲೇಶ್ವರ ವೃತ್ತದಿಂದ ಎಸ್.ಎಮ್.ಭೂಮರೆಡ್ಡಿ ಮೈದಾನ ತಲುಪಿತು.
ಇದೇ ಸಂದರ್ಭದಲ್ಲಿ ಕನಕಪ್ಪಕಲ್ಲೊಡ್ಡರ ಅನಿಲ್ ಭಜಂತ್ರಿ ಭಜಂತ್ರಿ ಸಮಾಜದ ಅಧ್ಯಕ್ಷರು ಮುತ್ತಣ್ಣ ಭಜಂತ್ರಿ ಮಾರುತಿ ಭಜಂತ್ರಿ ಯಲ್ಲಪ್ಪ ಬಂಕದ, ದುರಗಪ್ಪ ಮುಧೋಳ, ಬಸವರಾಜ್ ನಿಡಗುಂದಿ ಪರಶುರಾಮ್ ಭಜಂತ್ರಿ ರವಿಚಂದ್ರ ನಿಡುಗುಂದಿ ಸೇರಿದಂತೆ ಅನೇಕರು ಇದ್ದರು
